ನಂದಪಂಡಿತ
	1595-1630. ಒಬ್ಬ ಧರ್ಮಶಾಸ್ತ್ರಕಾರ. ವಿನಾಯಕ ಪಂಡಿತ ಎಂಬುದು ಇನ್ನೊಂದು ಹೆಸರು. ಕಾಶೀನಿವಾಸಿ. ಭಾರತದಲ್ಲಿ ಅನೇಕ ಕಡೆಗೆ ಸಂಚರಿಸಿ ಅನೇಕ ಧನಿಕರಿಂದ, ರಾಜರಿಂದ ಸನ್ಮಾನಿತನಾಗಿದ್ದ. ಈತನನ್ನು ಲೋಕಧರ್ಮಾಧಿಕಾರಿ ಎಂದು ಮನ್ನಿಸಲಾಗಿತ್ತು. ಈತ ಬರೆದಿರುವ ಅನೇಕ ಗ್ರಂಥಗಳಲ್ಲಿ ಪ್ರಮುಖ ಗ್ರಂಥಗಳು ಇವು.

	ವಿದ್ವನ್ಮನೋಹರ ಎಂಬುದು ಪರಾಶರಸ್ಮøತಿಯನ್ನು ಕುರಿತು ಬರೆದ ಟೀಕೆ. ಪ್ರಮಿತಾಕ್ಷರ ಮತ್ತು ಪ್ರತೀತಾಕ್ಷರ ಎಂಬುವು ಮಿತಾಕ್ಷರ ಗ್ರಂಥದ ಮೇಲಿನ ಟೀಕೆಗಳು. ಶ್ರಾದ್ಧಕಲ್ಪಲತಾ, ಸ್ಮøತಿಸಿಂಧೂ, ತತ್ತ್ವಮುಕ್ತಾವಲೀ, ಕೇಶವ ವೈಜಯಂತಿ, ನವರಾತ್ರಪ್ರದೀಪ, ಹರಿವಂಶವಿಲಾಸ, ಕಾಶೀಪ್ರಕಾಶ, ತೀರ್ಥಕಲ್ಪಲತಾ, ಶುದ್ಧಿಚಂದ್ರಿಕಾ, ಕಾಲನಿರ್ಣಯಕೌತುಕ, ಜ್ಯೋತಿಃಸಾರಸಮುಚ್ಚಯ, ಸ್ಮಾರ್ತ ಸಮುಚ್ಚಯ ಮತ್ತು ದತ್ತಕಮೀಮಾಂಸಾ-ಇವು ಇತರ ಕೆಲವು.

	ಕೇಶವ ವೈಜಯಂತಿ, ವೈಜಯಂತಿ ಎಂದೂ ಪ್ರಸಿದ್ಧ. ಇದು ಕರ್ನಾಟಕ ರಾಜ್ಯದ ಬೀಜಾಪುರ ಜಿಲ್ಲೆಯ ಬಿಜಾಪುರದಲ್ಲಿದ್ದ ಬ್ರಾಹ್ಮಣ ರಾಜವಂಶದ ಚರಿತ್ರೆ. ಇದನ್ನು ಕೋಂಡಪನಾಯಕನ ಪುತ್ರ ಕೇಶವನಾಯಕನ ಹೆಸರಿನಲ್ಲಿ ಬರೆಯಲಾಗಿದೆ.

	ಸ್ಮøತಿಸಿಂಧೂ ಕೃತಿಯನ್ನು ಕವಿ, ಮಹೇಂದ್ರ ಮನೆತನದ ರಾಜಾ ಮಂಗೋನಪುತ್ರ ಹರಿವಂಶವರ್ಮನ ಆಜ್ಞೆಯ ಮೇರೆಗೆ ರಚಿಸಿದುದಾಗಿ ತಿಳಿಸಿದ್ದಾನೆ.
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ